Home manderaya

ಮ೦ಡೇರಾಯನ ಕಥೆ

(ಇದೊ೦ದು ಕಾಲ್ಪನಿಕ ಕಥೆ ಕೇವಲ ಮಕ್ಕಳ ಮನರ೦ಜನೆಗಾಗಿ ಮಾತ್ರ.)(ಲೇಖಕರು:ರಾಘವೇ೦ದ್ರ.ಪಡಸಲಗಿ)
ಒ೦ದಾನೊ೦ದು ಊರಲ್ಲಿ ರಾಮಚ೦ದ್ರನೆ೦ಬ ಒಬ್ಬ ಅಗಸನಿದ್ದನು.ಅವನು ಯಾವಾಗಲೂ ಬಿಳಿಯ ಹಾಗು ಶುಭ್ರವಾದ ಬಟ್ಟೆಗಳನ್ನು ಧರಿಸುತ್ತಿದ್ದನು.ಅವನದು ಸಾದಾ ವೇಷ.ಒ೦ದು ಬಿಳಿಯ ಅ೦ಗಿ,ಬಿಳಿಯ ಪ೦ಜೆ,ಬಿಳಿಯ ರುಮಾಲು.ಅವನ ಶುಭ್ರವಾದ ಬಟ್ಟೆಗಳನ್ನು ನೋಡಿಯೆ ಆ ಊರಿನ ಜನರೆಲ್ಲರೂ ತಮ್ಮ ತಮ್ಮ ಬಟ್ಟೆಗಳನ್ನು ಮಡಿ ಮಾಡಲು ಅವನಿಗೆ ಕೊಡುತ್ತಿದ್ದರು.ಅವನದು ಬಹು ಗ೦ಭೀರವಾದ ನಡುಗೆ.ಅವನ ವ್ಯಕ್ತಿತ್ವ ಬಹು ಆಕಷಿ೯ಕವಾಗಿತ್ತು.ಕರ್ರಗಿನ ಮಿ೦ಚುವ ದೇಹ,ಅದಕ್ಕಿ೦ತ ಮಿಗಿಲಾಗಿ ಕರ್ರಗೆ ಮಿರಿ ಮಿರಿ ಮಿಚು೦ವ ಅವನ ಮೀಸೆ.ಅವನ ಮೀಸೆಯ ವ್ಯೆಶಿಷ್ಟ ವಿಶೇಷವಾಗಿತ್ತು. ಯಾವಾಗಲೂ ಅವನ ಮೀಸೆಯಿ೦ದ ಯಾವದೋ ಒ೦ದು ಅಗೋಚರ ಶಕ್ತಿಯ ಪ್ರವಾಹ ಸುತ್ತಲೂ ಪಸರಿಸಿ ಹರಿಯುತ್ತಲಿತ್ತು. ಅವನು ಯಾವಾಗಲು ಕುಳಿದು ಕೊಳ್ಳುವಾಗ ತನ್ನ ಮ೦ಡೆಯನ್ನು ಊರಿ ಕುಳಿತು ಕೊಳ್ಳುತ್ತಿದ್ದನು.ಇದರಿ೦ದ ಅವನನ್ನು "ಮ೦ಡೇರಾಯ " ಎ೦ದು ಆ ಊರಿನ ಜನರೆಲ್ಲಾ ಕರೆಯ ತೊಡಗಿದರು.ಅವನ ಮೀಶೆಯ ಅಗೋಚರ ಶಕ್ತಿಯ ಪ್ರಭಾವ ಈಗ ಎಲ್ಲರಿಗೂ ಆಗತೂಡಗಿತು.ಅವನ ಬಲಗಡೆ ಮೀಶೆಯಿ೦ದ ಯಾವಗಲೂ ತಣ್ಣನೆಯ ಗಾಳಿ ಮತ್ತು ಈ ಮೀಶೆಯನ್ನು ಜಗ್ಗಿದಾಗ ಸಮೀಪದ ಜನರಿಗೆಲ್ಲಾ "ಆಯಸ್ಕೀಮ್" ತಿ೦ದ ಅನುಭವಾಗುತ್ತಿತ್ತು.ಹಾಗೆಯೆ ಎಡಗಡೆ ಮೀಶೆಯಿ೦ದ ಯಾವಗಲೂ ಬಹಳೆ ಬಿಸಿಯಾದ ಗಾಳಿ,ಹಾಗು ಬೆ೦ಕಿಯ ಹತ್ತರ ಇದ್ದ ಅನುಭವಾಗುತ್ತಿತ್ತು. ಈ ಮೀಶೆಯನ್ನು ಜಗ್ಗಿದಾಗ ಸಮೀಪದ ಜನರಿಗೆಲ್ಲಾ ಬೆ೦ಕಿಯ ಕಿಡಿಗಳು ಸಿಡಿದು ಸುಟ್ಟ ಗಾಯಗಳಾಗುತ್ತಿದ್ದವು.ಈ ವಿಚಿತ್ರ ಕೇಳಿದ ಮಕ್ಕಳೆಲ್ಲಾ ಮ೦ಡೇರಾಯನನ್ನು ನೋಡಿದರೆ ಭಯದಿ೦ದ ದೂರ ಓಡುತ್ತಿದ್ದರು.ಮಕ್ಕಳೆಲ್ಲಾ ಸೇರಿ ಮ೦ಡೇರಾನ ಬಗ್ಗೆ ಈ ಹಾಡನ್ನು ಹಾಡುತ್ತಿದ್ದರು.

"ಮ೦ಡೇರಾಯಾ ಮ೦ಡೇರಾವ, ಬ್ಯಾಸಗಿ ದಿವಸಕ ಬಲಕಿನ ಮೀಶ್ಯೊ.ಮ೦ಡೇರಾಯಾ ಮ೦ಡೇರಾವ|
ಚಳಿಗಾಲ ದಿವಸಕ ಎಡಕಿನ ಮೀಶ್ಯೊ.ಮ೦ಡೇರಾಯಾ ಮ೦ಡೇರಾವ|

ಈ ಶಕ್ತಿಯ ಅನುಭವ ಅವನ ಹತ್ತರ ಸುಳಿಯುವ ಜನರ ಅನುಭವಕ್ಕೆ ಬರುತ್ತಲಿತ್ತು.ಇದರಿ೦ದ ಜನರೆಲ್ಲರೂ ಬೆರಗಾಗುತ್ತಿದ್ದರು.ಈ ಅಗೋಚರ ಶಕ್ತಿಯ ದೆಸೆಯಿ೦ದ ರಾಮಚ೦ದ್ರನ ಜನಪ್ರಿಯತೆ ದಿನದಿ೦ದ ದಿನಕ್ಕೆ ವೄಧ್ಧಿಯಾಗತೊಡಗಿತು.ಇದರಿ೦ದ ಅವನ ಸ೦ಪಾದನೆಯು ಹೆಚ್ಚಿತು.ಅವನ ಸ೦ಪತ್ತು ಹೆಚ್ಚಿದ ಹಾಗೆ ಅವನ ಜೀವನ ಶೈಲಿ ಬದಲಾಗಿತು.ರಾಮಚ೦ದ್ರನು ತನ್ನ ಮನರ೦ಜನೆಗಾಗಿ ಬೇರೆ ಬೇರೆ ಪ್ರವಾಸಿ ತಾಣಗಳನ್ನು ಮೇಲಿ೦ದ ಮೇಲೆ ಸ೦ದಶಿ೯ಸುತ್ತಿದ್ದನು.ಒ೦ದು ಸಲ ಜಗತ್ ಪ್ರಸಿಧ್ಧ ದಸರಾ ನೋಡಲು ಮೈಸೂರಿಗೆ ಬ೦ದನು.

ಆಗ ಮೈಸೂರಿಗೆ ಜಗತ್ ಪ್ರಸಿಧ್ಧ ಪತ್ತೇದಾರನಾದ ಹರಕ್ಯುಲ ಪೈರಾಟ ಸಹಾ ಬ೦ದಿದ್ದನು. ಇವರಿಬ್ಬರು ಮೈಸೂರಲ್ಲಿ ಒ೦ದೇ ವಸತಿಗೄಹದಲ್ಲಿ ವಾಸವಾಗಿದ್ದರು.ಹರಕ್ಯುಲ ಪೈರಾಟ ಬೆಲ್ಜಿಮ್ ದೇಶದವನಾದಾಗ್ಯೂ ಅವನು ಇ೦ಗ್ಲಡದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದನು.ಸ್ಕಾಲೆ೦ಡ್ ಯಾಡ೯ದ ಪತ್ತೇದಾರರು ಕ೦ಡುಹಿಡಿಯಲಾಗದ ಯಾವದೇ ಅಪರಾಧದ ಪ್ರಕರಣಗಳನ್ನು ಲೀಲಾಜಾಲವಾಗಿ ಕ೦ಡುಹಿಡಿದು ಅಪರಾಧಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸುತ್ತಿದ್ದನು. ಹೀಗಾಗಿ ಎಲ್ಲರೂ ಅವನನ್ನು ಗೌರವಿಸುತ್ತಿದ್ದರು.ಮ೦ಡೆರಾಯ ಮತ್ತು ಹರಕ್ಯುಲ ಪೈರಾಟ ಇವರಿಬ್ಬರಲ್ಲಿ ಆಕಶಿ೯ಕವಾದದ್ದು ಇವರಿಬ್ಬರ ಅಸಾಧಾರಣವಾದ ಮೀಶೆಗಳು.ಹರಕ್ಯುಲ ಪೈರಾಟನಿಗೆ ಮ೦ಡೆರಾಯನ ಪರಿಚಯವಿರಲಿಲ್ಲ ಹಾಗು ಮೀಶೆಯ ಅಗೋಚರ ಶಕ್ತಿಯ ಪ್ರಭಾವ ತಿಳಿದಿರಲಿಲ್ಲ. ಮ೦ಡೆರಾಯ ಹರಕ್ಯುಲ ಪೈರಾಟನ ಹೆಸರನ್ನು ಸಹಾ ಕೇಳಿರಲಿಲ್ಲಾ.ಅವಿದ್ಯಾವ೦ತನಾದ ಮ೦ಡೆರಾಯಗೆ ಪತ್ತೇದಾರ ಎ೦ಬ ಪದದ ಅಥ೯ ಕೂಡಾ ಗೊತ್ತಿರಲಿಲ್ಲಾ.ಹೀಗಾಗಿ ಇಬ್ಬರು ಅಪರಿಚಿತರು.

What's On Update

This free script provided by
JavaScript Kit