Back to Home

ಶ್ರೀಮು೦ಡೇವಾಡಿದಾಸರು
ಹರಿದಾಸರು



ಶ್ರೀಮು೦ಡೇವಾಡಿದಾಸರು



Collection:Raghavendra.Padasalgi

ಮುಂಡೆವಾಡಿ ರಾಮ ದಾಸರು
ವೈಕುಂಠ ಪರಿಹಾಯ ಯತ್ರ ರಮಯಾ
ತ್ವಂ ಸಂತತಂ ಮೋದಸೇ |
ಬ್ರಹ್ಮಾಂಡೇ ನಹಿ ಕಿಂಚನ ಸ್ಥಲಮಹೋ ಶೈಲಾದ್ಗಿರೀಯೋ ಧ್ರುವಂ ||
ತ್ವದ್ಭಕ್ತಜನಾರ್ಥಮೀಪ್ಸೀತಮಹೋ
ದಾತುಂ ಕ್ಷಮಃ ಕೋಪಿ ನ |
ಶ್ರೀಮದ್ವೇಂಕಟನಾಥ ಪಾಲಯ
ಸದಾ ರಾಮಾರ್ಯ ಪಾದೇ ನತಾನ ||

ಮುಂಡೆವಾಡಿ ದಾಸರು ಮೂಲತಃ ಅಗರಖೇಡದ ವಾಸಿಗಳು. ಬಾಲ್ಯದಿಂದಲೂ ಆಂಜನೇಯನ ಉಪಾಸನೆಯಿಂದ ಆಜಾನುಬಾಹು ದೇಹ. ಅವರ ಕಾಲದಲ್ಲಿ ಅಪ್ರತಿಮ ಕುಸ್ತಿ ಪಟ್ಟು. ತಮ್ಮ ಕಾಲಮಾನದಲ್ಲಿ ಎಲ್ಲ ಪ್ರಸಿದ್ಧ ಜಟ್ಟಿ ಕಾಳಗದ ಪಟ್ಟುಗಳನು ಪರಾಭವಗೊಳಿಸಿ ಸೋಲಿಲ್ಲದ ಸರದಾರಾಗಿದ್ದರು.
ಒಮ್ಮೆ ನಾಡಿನ ಪ್ರಸಿದ್ಧ ಜಟ್ಟಿ ಕಾಳಗದಪಟ್ಟುರೊಡನೆ ಕುಸ್ತಿಯ ಕಾಳಗ. ಭೀಮಬಲದ ಅಗರಖೇಡ ಆಚಾರ್ಯರು ಅತಿಸುಲಭವಾಗಿ ಜಯಿಸಿದರು. ಕಾಳಗ ಮುಗಿದ ನಂತರದಲ್ಲಿ ಸೋತ ಮಲ್ಲ “ಎಲೆ ಆಚಾರಪ್ಪ ! ನೀನು ಬ್ರಾಹ್ಮಣ ಕುಲದವನು ನೆಮ್ಮಲ್ಲ ಉಳಿದ ಕುಲದವರಿಗೆ ಗುರುವಾಗಬೇಕು. ವೇದ ಶಾಸ್ತ್ರ ಪುರಾಣ ಅಧ್ಯಯನ ಮಾಡಿ ಜನರ ತಿಳಿಹೇಳೋ ಕೆಲಸ ಬಿಟ್ಟು ಇದು ಯಾವ ಮಣ್ಣಿನಲ್ಲಿ ಉರುಳಿ ಕುಸ್ತಿ ಕಾಳಗದಿಂದ ಏನು ಪುರುಷಾರ್ಥಕಾಗಿ ಈ ಪ್ರಯಾಸ ಮಾಡುವಿರಿ? ಎಂದು ಕುಸ್ತಿಯಲ್ಲಿ ಸೋತ ಆ ಪಟ್ಟು ಹೇಳುತ್ತಾನೆ.
ಯಾವ ಅಕ್ಷೋಭ್ಯ ತೀರ್ಥರ ಕಿಂ ಪಶುಹಃ ಪೂರ್ವ ದೇಹೆಯ್ ಮಾತಿಗೆ ಧೂಂಡೋ ರಘುನಾಥರು ಜಯತೀರ್ಥರಾದರೊ , ಬೀದಿ ದಾಸಪ್ಪನ ಮಂಚ ಬಾರದೋ ಮಡದಿ ಬಾರಳೋ ಕೀರ್ತನೆಗೆ ಶ್ರೀ ಜಯತೀರ್ಥಾಚಾರ್ಯರು ವೈರಾಗ್ಯವನ್ನು ಪಡೆದು ವಿಷ್ಣುತೀರ್ಥರೆಂದು ಜಗನ್ಮಾನ್ಯರಾದರೊ ಹಾಗೆಯೇ ಅಗರಖೇಡ ಆಚಾರ್ಯರು ಆ ಸೋತ ಪಟುವಿನ ಮಾತುಗಳನ್ನು ಕೇಳಿ ಮನಸ್ಸಿಗೆ ಹತ್ತಿರವೆನಿಸಿ ಅಧ್ಯಾತ್ಮದಲ್ಲಿ ಒಲವು ಬೆಳೆಸಿಕೊಳ್ಳುತ್ತಾರೆ.ಸುಮಾರು 12 ವರ್ಷಗಳಕಾಲ ಏಕಾಂತದಲ್ಲಿ ಹರಿವಾಯುಗುರುಗಳ ಸೇವೆಮಾಡಿ ಸಿದ್ದಿಹೊಂದಿ ಮುಂಡೆವಾಡಿರಾಮ ದಾಸರು ಎಂದು ಖ್ಯಾತಿಹೊಂದಿದರು.
ಮಂತ್ರಾಲಯ ಗುರುಸಾರ್ವಭೌಮರ ದರ್ಶನಕಾಗಿ ದಾಸರು ಬಂದಿರುತ್ತಾರೆ. ದಾಸರು ಆಗಮನದ ವಿಷಯ ಕೇಳಿದ ಇಭರಾಮಪುರ ಅಪ್ಪಾವರ ಧರ್ಮಪತ್ನಿ ಅಚಮ್ಮ ದಾಸರನು ಮನೆಗೆ ಬರಮಾಡಿಕೊಳ್ಳುತ್ತಾರೆ. ದಾಸರಿಗೆ ಅಪ್ಪಾವರಲ್ಲಿದ ಬಂಗಾರ ಬೆಳ್ಳಿ ಆಭರಣ ಸಮರ್ಪಣೆ ಮಾಡುತ್ತಾರೆ. ದಾಸರು ಪರಮವೈರಾಗ್ಯಶಾಲಿಗಳು ವಿನಮ್ರವಾಗಿ ನಿರಾಕರಿಸಿ ಅಚಮ್ಮರಿಗೆ ಇಭರಾಮಪುರ ಶ್ರೀಅಪ್ಪಾವರು ಪೂಜಿಸುತ್ತಿದ್ದ ಏಕಮುಖಿ ಪ್ರಾಣದೇವರು ಪೂಜಿಸಲು ಇಚ್ಚಿಸುತ್ತಾರೆ. ದಾಸರ ಆಸೆಯಂತೆ ಇಭರಾಮಪುರ ಅಪ್ಪಾವರು ಮತ್ತು ಅವರ ಮನೆತದನ ಪೂರ್ವಿಕರು ಪೂಜಿಸಿದ ಪ್ರಾಣದೇವರು ದಾಸರು ಪೂಜಿಸಲು ಅವಕಾಶ ಕೊಟ್ಟು ಆ ಪ್ರಾಣದೇವರನ್ನು ದಾಸರಿಗೆ ದಾನವನ್ನು ಮಾಡುತ್ತಾರೆ. ಆ ಪ್ರಾಣದೇವರು ದಾಸರು ನಿತ್ಯದಲ್ಲಿ ಪೂಜಿಸಿ ಬಂದ ಜನರಿಗೆ ದುರಿತ ಪರಿಹಾರ ಮಾಡುತಿದ್ದರು.
ದಾಸರು ಬಹುಕಾಲ ಮುಂಡೆವಾಡಿಯಲ್ಲಿಯೇ ಇದ್ದು ಹತ್ತು ಹಲವು ಶಿಷ್ಯಸಂಪತ್ತು ಬೆಳೆಸಿ ದಾಸ ಸಾಹಿತ್ಯದ ಮತ್ತು ಮಧ್ವ ಮತದ ಪ್ರಚಾರ ಮಾಡಿ ಆಷಾಢ ಮಾಸ ಕೃಷ್ಣ ಪಕ್ಷ ಸಪ್ತಮಿ ಶ್ರೀಮುಂಡೆವಾಡಿ ದಾಸರು ಹರಿಪಾದವನ್ನು ಸೇರಿದರು.

ಮುಂಡೇವಾಡೀ ರಾಮದಾಸರು
ಈಗ್ಗೆ ಎಂಭತ್ತು ವರ್ಷಗಳ ಕೆಳಗೆ ಆಗಿಹೋದ ಮಹಾತ್ಮರು ಇವರು.
೧) ಮಣ್ಣೂರಿನಿಂದ ತಿರುಮಲೆಯ ವರೆಗೆ ಹೆಜ್ಜೆ ನಮಸ್ಕಾರ ಹಾಕುತ್ತಾ ಸ್ವಾಮಿಯ ಪಾದಸ್ಪರ್ಶ ಮಾಡಿದವರು ಇವರು
೨) ರಾಯರ ಅಂತಃಕರಣ ಪಾತ್ರರು. ಇವರಿಗೋಸ್ಕರ ರಾಯರು ತಮ್ಮ ಕೈಯ್ಯಲ್ಲಿದ್ದ ಸುದರ್ಶನ ಇವರಿಗೆ ನೀಡಿ ದಾಸರ ಸುದರ್ಶನ ಬೃಂದಾವನದಲ್ಲಿ ಇರಿಸಿಕೊಂಡರು.
೩) ಜಂಬುಖಂಡೀ ಆಚಾರ್ಯರಿಗೆ ಪರಮಾಪ್ತರು
೪) ಶ್ರೀ ಐಜೀ ಸ್ವಾಮಿಗಳೇ ಇವರಾಗಿ ಪುನಃ ಜನ್ಮತಾಳಿದರು
೫) ವರದೇಶ ವಿಠಲರಿಗೆ ಪ್ರಾಪ್ತವಾದ ಮಹಾಜಾಡ್ಯ ಪರಿಹಾರ ಮಾಡಿದವರು.
೬) ಗೊರಬಾಳ ಹನುಮಂತರಾಯರು ಶ್ರೀ ದಾಸರಾಯರು ಮಾಡುತ್ತಿದ್ದ ಪುರಂದರದಾಸರ ಆರಾಧನೆಯಲ್ಲಿ ಪಾಲ್ಗೊಂಡು ಸ್ಫೂರ್ತಿ ಪಡೆದರು
೭) ಸಾತ್ವೀಕ ಗುರಾಚಾರ್ಯರ ಒಡನಾಟದಲ್ಲಿದ್ದವರು
prandevaru ಇಭರಾಮ ಪುರ ಅಪ್ಪಾವರ ಪರಿವಾರದವರು ಅಪ್ಪಾವರು ಧರಿಸುತ್ತಿದ್ದ ಆಭರಣಗಳನ್ನು ಇವರಿಗೆ ಸಮರ್ಪಣೆ ಮಾಡಬರಲಾಗಿ ಅದಾವುದನ್ನೂ ಸ್ವೀಕರಿಸದೆ ಅಪ್ಪಾವರು ಅರ್ಚಿಸಿದ ಏಕಮುಖಿ ಪ್ರಾಣದೇವರನ್ನ ಸ್ವೀಕರಿಸಿದರು....ಅದೇ ಪ್ರಾಣಪ್ರತೀಕ ಇಲ್ಲಿ ಕೊಡಲಾಗಿದೆ.
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ ಇಭರಾಮಪುರ


ಈ ಮಹಾನುಭಾವರಿಂದ ನಮ್ಮ ತಾಯಿಗೆ
ಸ್ವಪ್ನದ್ವಾರಾ "ಮುದ್ದುವಿಠ್ಥಲ" ಅಂಕಿತವಾಗಿದೆ.
(ರಾಘವೇಂದ್ರ ಪಡಸಲಗಿ)
Mundewadi Dasru

Back

Back to Home