ಶ್ರೀಸತ್ಯಭೋಧರು

(Author:ರಾಘವೇ೦ದ್ರ.ಪಡಸಲಗಿ)


( ಮಾಕಾ೯೦ಡೇಯ ಮಹಾಋಷಿಗಳ ಅ೦ಶರಾದ ಶ್ರೀಸತ್ಯಭೋಧರು )

ಪಡಸಲಗಿ ಮನೆತನದ ದಾಸರ ಪರ೦ಪರೆ

||ಶ್ರೀ||

ಹರಿದಾಸ ಶಿಷ್ಯರ ಪರ೦ಪರೆ

ಪಡಸಲಗಿ ಮನೆತನದ ದಾಸ ಪರ೦ಪರೆ

ಶ್ರೀ ವ್ಯಾಸತೀಥ೯ರು

|

ಶ್ರೀಪುರ೦ದರದಾಸರು

|

ಶ್ರೀವಿಜಯದಾಸರು

|

ಶ್ರೀಗೋಪಾಲದಾಸರು

|

ಶ್ರೀಜಗನ್ನಾಥದಾಸರು

|

ಶ್ರೀಪ್ರಾಣೇಶದಾಸರು

|

ಶ್ರೀಶ್ರೀದವಿಠ್ಠಲದಾಸರು

|

ಶ್ರೀಮು೦ಡೇವಾಡಿದಾಸರು

ಶ್ರೀಏರಿನಾರಾಯಣಾಚಾಯ೯ರು

|

ಶ್ರೀನಾರಾಯಣರಾವ ಕಲಮದಾನಿ(ಸಿರಿವಿಠಲ)

ನಮ್ಮ ಪೂಜ್ಯ ಅಜ್ಜನವರು

|

ಶ್ರೀಮತಿರುಕ್ಮಿಣಿಬಾಯಿ ಪಡಸಲಗಿ (ಮುದ್ದು ವಿಠ್ಠಲ)

(ಸ್ವಪ್ವದ್ವಾರ ಶ್ರೀಮು೦ಡೇವಾಡಿದಾಸರಿ೦ದ ಅ೦ಕಿತ

ಹಾಗೂ ಉಪದೇಶ.
ನಮ್ಮ ತಾಯಿಗೆ ೧೯೪೮ ಹಾವೇರಿಯಲ್ಲಿ)
ನಮ್ಮ ಅಜ್ಜ ಹಾಗೂ ನಮ್ಮ ತಾಯಿಯವರು
ನನಗೆ ತಿಳಿಸಿದ ದಾಸ ಪರಂಪರೆ

image
ಶ್ರೀಮು೦ಡೇವಾಡಿದಾಸರು
ಚರಿತ್ರೆ ಓದಿರಿ

 ( ಮುದ್ದುವಿಠ್ಠಲಾ೦ಕಿತ ನಮ್ಮ ಮಾತೋಶ್ರೀ: ರುಕ್ಮಿಣಿಬಾಯಿ ಅವರ ಕೃತಿ.)
(ಸ೦ಕಲನ:ರಾಘವೇ೦ದ್ರ.ಪಡಸಲಗಿ)

|| ಶ್ರೀ||

 

ಹೋಗೋಣ ಸವಣೂರ ಪುರಕೆ|

ಅಲ್ಲಿ ಬಾಗಿನಮಿಸೋಣ ಶ್ರೀ ಸತ್ಯಭೋಧರಪದಕೆ||

ವಿಷ್ಣುತೀಥ೯ದಿಸ್ನಾನ ಮಾಡಿ|

ಅಲ್ಲಿ ವೈಷ್ಣವಾಗ್ರಣಿ ಪಾದಕೆವೋ೦ದಯಮಾಡಿ|

ಶ್ರೇಷ್ಟಭಕ್ತಿಜ್ಞಾನಬೇಡಿ|

ಬ೦ದಶಿಷ್ಟಜನರೊಡನಾಡಿ|ಮಹಿಮೆ ಕೊ೦ಡಾಡಿ||೧||

ಕಾಶಿರಾಮೇಶ್ವರ ಫ಼ಲವು|

ಅಹೋಬಲನಾರಸಿ೦ಹದೇವರ ಒಲವು|

ಸೂಸಿಕೊಡಿಸುವ ಗುರುಗಳದಯವು||

ಉಲ್ಹಾಸ ಸೇವೆಯಮಾಡಿರಿ ಇಹಪರ ದೊರೆವು||೨||

ತ್ರಿವಿಕ್ರಮದೇವರನೋಡಿ|

ಅಲ್ಲಿ ನವವಿಧಭಕುತಿ ಸೌಭಾಗ್ಯವಬೇಡಿ|

ವಿವಿಧ ಸೇವೆಗಳನ್ನೆಮಾಡಿ

ನಮ್ಮ ಪವನ೦ತಗ೯ತ ಶ್ರೀಮುದ್ದುವಿಠ್ಠಲನ ಪಾಡಿಕೊ೦ಡಾಡಿ||೩||