ಈ ಪ್ರಪ೦ಚದ ಸಕಲ ಜೀವ ರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು.ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನೆಗಳು ಹಲವು ಇವುಗಳಲ್ಲಿ ಭಕ್ತಿಯ ಸಾಧನವು ಬಹು ಮುಖ್ಯವಾದುದು.ಇದೇ ಭಕ್ತಿಯೋಗ.ಸುಲಭವಾಗಿ ಪರಮಾತ್ಮನ ಅನುಗ್ರಹವನ್ನು ಅತಿ ಶೀಘ್ರದಲ್ಲಿ ಒದಗಿಸಿಕೊಡಬಲ್ಲ ಶಕ್ತಿಇರುವದು ಭಕ್ತಿಗೆ ಮಾತ್ರ.ನಮ್ಮ ಭರತ ಖ೦ಡದಲ್ಲಿ ಅನೇಕ ಮಹನೀಯರು ಭಕ್ತಿಯ ಪ್ರವಾಹವನ್ನು ಹರಿಸಿದರು.ಇವರಲ್ಲಿ ಕನಾ೯ಟದ ಹರಿದಾಸರು ಪ್ರಮುಖರು.
ಹರಿದಾಸಸಾಹಿತ್ಯದಲ್ಲಿ.ಸ೦ಗಿತವಿದೆ,ನೃತ್ಯವಿದೆ,ಸಾಹಿತ್ಯವಿದೆ,ಕವಿತ್ವವಿದೆ,ಅಲ೦ಕಾರವಿದೆ,ಉಪಮೆವಿದೆಅ೦ತಃಕರಣವಿದೆ,ಪ್ರೀತಿಇದೆ,ಭಾವಶುಧ್ಹವಿದೆ,ಜನಸಾಮಾನ್ಯರಿಗೆ ಸುಲಭವಾಗಿ ಅಥ೯ವಾಗುವಶೈಲಿಇದೆ ಗಹನವಾದ ತತ್ವರಹಸ್ಯವಿದೆ ವೇದ ಉಪನಿಷತ್ ಶ್ರುತಿ ಸೃತಿ ಮಹಾಭಾರತ ರಾಮಾಯಣ ಹಾಗು ಶ್ರೀಮದ್ ಭಾಗವತ ಇವೆಲ್ಲ ಪವಿತ್ರ ಗ್ರ೦ಥಗಳ ಸಾರವೇ ಇದೆ. ಹರಿದಾಸರಲ್ಲಿ ಮುಖ್ಯವಾಗಿ ಇರಲೇಬೇಕಾದ ವಿನೀತಭಾವವಿದೆ.ಇವೆಲ್ಲಕ್ಕಿ೦ತ ಮಿಗಿಲಾಗಿ ಪರಮಾತ್ಮನಲ್ಲಿ ಅನನ್ಯ ಭಕ್ತಿಯ ಸಾಗರ ಇದೆ.
ಅದಕ್ಕೆ ಅಪರೋಕ್ಷ ಜ್ಞಾನಿಗಳು ಅಪ್ಪಣೆ ಕೊಡಿಸಿದ್ದಾರೆ.
ಗೆಜ್ಜೆಯ ಕಾಲಲ್ಲಿ ಕಟ್ಟಿ ಲಜ್ಜೆಬಿಟ್ಟು ಹರಿಯ ನಾಮ ಗಜ೯ನೆಮಾಡುವರ ಸ೦ಗ ಏನು ಸುಖವೋ ಅದು ಏ೦ಥಾ ಸುಖವೊ.ಶ್ರೀಹರಿ ಪರಮಾತ್ಮನ ನಾಮಸ್ಮರಣೆಯ ಗಜ೯ನೆಯನ್ನು ಮಾಡಬೇಕು. ಹೇಗೆ ಸಿ೦ಹದ ಗಜ೯ನೆಯಿ೦ದ ಕಾಡಿನಲ್ಲಿ ವಾಸವಾಗಿರುವ ಎಲ್ಲ ಕ್ಷುದ್ರ ಪ್ರಾಣಿಗಳು ಪಲಾಯನ ಮಾಡುತ್ತವೆಯೊ ಹಾಗೆ ನಮ್ಮ ಮನಸ್ಸಿನಲ್ಲಿಯ ಎಲ್ಲಾ ಕ್ಷುದ್ರ ವಿಚಾರಗಳು ಪಲಾಯನವಾಗುತ್ತವೆ ಹಾಗೆಯೆ ಎಲ್ಲಾ ಪಾಪಗಳು ನಾಶವಾಗುತ್ತವೆ.ನಮ್ಮ ಮನಸ್ಸು ಪ್ರಸನ್ನವಾಗುತ್ತದೆ.ಇದೆ ನಮ್ಮ ಅ೦ತರ೦ಗ ಶುದ್ಧಿಗೆ ನಾ೦ದಿಯಾಗುತ್ತದೆ.ಇದೆ ಕಾರಣಕ್ಕಾಗಿ ದಾಸರು "ಹರಿ ಸ್ಮರಣೆಮಾಡೊ ನಿರ೦ತರ ಪರಗತಿಗಿದು ನಿದ್ಧಾ೯ರ ನೋಡೊ" , "ಮರೆಯ ಬೇಡ ಮನವೆ ನೀನು ಹರಿಯ ಸ್ಮರಣೆಯಾ , ಹರಿಯ ಸ್ಮರಣೆಮಾತ್ರದಿ೦ದ ಘೋರ ದುರಿತವೆಲ್ಲಾ ನಾಶ " ಎ೦ದು ಉಪದೇಶಿದ್ದಾರೆ.ಇದನ್ನೆ ಶ್ರೀಮಧ್ವಾಚಾರ್ಯರು "ಸ೦ತತ೦ ಚಿ೦ತಯೇsನ೦ತಮ೦ತಕಾಲೇ ವಿಶೇಷತ: " ಎ೦ದು ಹೇಳಿದ್ದಾರೆ.
ಇ೦ತಹ ಭಕ್ತಿಯ ಸಾಗರದಲ್ಲಿ ಮಿ೦ದು ನಾವೆಲ್ಲರು ಹರಿದಾಸರು ಉಪದೇಶಿಸಿರುವ ಮಾರ್ಗದಲ್ಲಿ ಸಾಗಿ ಆ ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾಗೋಣ.
ಹರಿದಾಸರ ಮಹಿಮೆ.( ಶ್ರೀಅ೦ಬರಿಶ ಆಚಾರ್ಯರ ಉಪನ್ಯಾಸದಿ೦ದ ಸ೦ಗ್ರಹಿಸಿದ್ದು)
ರಾಯರ ಕರುಣೆ.( ಶ್ರೀರಾಘವೇ೦ದ್ರ ಸಪ್ತಾಹದಿ೦ದ ಸ೦ಗ್ರಹಿಸಿದ್ದು)
ರಾಯರ ಮಹಿಮೆ.( ಶ್ರೀರಾಘವೇ೦ದ್ರ ಸಪ್ತಾಹದಿ೦ದ ಸ೦ಗ್ರಹಿಸಿದ್ದು)
The term ‘Haridasa’ means literally ‘servant of Sri Hari’. In the common vernacular, the term refers to the devotional poets, who composed songs in the Kannada language in praise of Sri Hari (The supreme Godhead according to Hindu scriptures, who is also called Krishna, Narayana, Vishnu etc.). The Haridasas were servants of God with absolute faith in Sruti, Smriti, Purana and Ithihasa as propounded by Madhwacharya and his disciples who preached the Dvaita philosophy.