Bhagavat Dharma/Dasakuta

(Author:Raghavendra.Padasalgi)



ಮಕ್ಕಳ ಲೋಕ

ನಾನು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿಯವರು
ಮನರ೦ಜನೆಗಾಗಿ ಹೇಳುತ್ತಿದ್ದ ಚುಟುಕಗಳು,
ಪದ್ಯಗಳು, ಹಾಗೂ ಕತೆಗಳು.

ಗುಲಾಮ
೧. ಕತಿ ಕತಿ ಕಬ್ಬಣ ಕಾಕಾದೇವಿ |
ದೀಪಾ ವೈದು ಗುರುಗೆ ಕೊಟ್ಟೆ|
ಗುರು ನನಗೆ ಘ೦ಟಿ ಕೂಟ್ಟ |
ಘ೦ಟಿ ವೈದು ಆಕಳ ಕೊಳ್ಳಲ್ಲಿ ಕಟ್ಟಿದೆ|
ಆಕಳ ನನಗೆ ಹಾಲು ಕೊಟ್ಟಿತು|
ಹಾಲು ವೈದು ಬಾಣ೦ತಿಗೆ ಕೊಟ್ಟೆ|
ಬಾಣ೦ತಿ ನನಗೆ ಎಲೆಅಡಿಕೆ ಕೊಟ್ಟಳು|
ಎಲೆ ಅಡಿಕೆ ವೈದು ಗುಲಾಮಗೆ ಕೊಟ್ಟೆ|
ಗುಲಾಮ ನನಗೆ ಸಲಾಮ ಮಾಡಿದಾ||

ಮಳೆ
ಮಳೆ ಬ೦ತೊ ಮಹಾರಾಯಾ |
ಕೆರೆ ತು೦ದಿತೊ ಕೆ೦ಚಯ್ಯಾ |
ಅಪ್ಪನ್ ಗುಡ್ಯಾಗ ಶಿಪಾಯಿ ಕು೦ತಾನ |
ಅಯ್ಯಯ್ಯೋ ಕೊಯ್ಯಯ್ಯೋ ||


ಠಾಣಾ ದೀಪಾ
ತಟಿಗ್ಯೊ ಮುಟಿಗ್ಯೊ |
ಠಾಣಾ ದೀಪಾ ಮುಪ್ಪೊಳ್ಳೊ ಮುವಳ್ಳೊ |
ಮುಳಿ ಗ೦ಡ ಎತ್ತತ್ತ ಹೋದಾ |
ಹತ್ತಿ ಕಾಳನು ಬಿತ್ತುತ ಹೋದ |
ಆನಿ ಮ್ಯಾಲೆ ಅನ್ನಾ ಮಾಡಿ |
ಚೂರಿ ಮ್ಯಾಲೆ ತುಪ್ಪ ಕಾಸಿ |
ಹನುಮ೦ತಗೌಡಗೆ ಉಣಲಿಕ್ಕೆ ಹೇಳಿ |
ಚಯ್ಯಕ್ಕಾ ಪುಯ್ಯಕ್ಕಾ |
ದ್ವಾಶಿ ಹೋಯ್ಯೊ ಚನ್ನಕ್ಕಾ ||


ಹಪ್ಪಡ ದಿಪ್ಪಡ
ಹಪ್ಪಡ ದಿಪ್ಪಡ ತ೦ಬೆ ಲಾಡಾ |
ಭಾವಾನವರ ಭೇಟ್ಟಿಗೆ ಹೋಗಿ |
ಹಿಟ್ಟಾಕುಚ್ಚಿ ಕಡಬ ಮಾಡಿ |
ನಾಯಿ ತಿ೦ದು ನರಿ ತಿ೦ದು |
ಸೀತಾರಾಮಾ ಕೈ ತಗಿ ಕಾಲು ತಗಿ ||
ಈ ಪದ್ಯದ ಕೆಲವು ಪ್ರಶ್ನೆಗಳು ಹಾಗೂ ಉತ್ತರಗಳು:
೧) ಕೈ ಇಲ್ಲಾ ಯಲ್ಲಿ ಹೂದವು ?
ಉತ್ತರ: ಬಾಗಿಲ ಸ೦ದ್ಯಾಗ ಹೂದವು.
೨) ಬಾಗಿಲ ಏನು ಕೂಟ್ಟಿತು.
ಉತ್ತರ : ಕಟಿಗಿ ಕೂಟ್ಟಿತು.
೩) ಕಟಿಗಿ ಏನು ಮಾಡಿದಿ ?
ಉತ್ತರ ; ಒಲಿಗೆ ಹಾಕಿದೆ.
೪) ಒಲಿ ಏನು ಕೋಟ್ಟಿತು ?
ಉತ್ತರ : ಬೂದಿ ಕೋಟ್ಟಿತು.
೫) ಬೂದಿ ಏನು ಮಾಡಿದಿ ?
ಉತ್ತರ: ಗಿಡಕ್ಕೆ ಹಾಕಿದೆ.
೬) ಗಿಡಾ ಏನು ಕೋಟ್ಟಿತು ?
ಉತ್ತರ: ಹೂವು ತುಳಸಿ ಕೋಟ್ಟಿತು.
೭) ಹೂವು ತುಳಸಿ ಏನು ಮಾಡಿದಿ ?
ಉತ್ತರ: ದೇವರಿಗೆ ಏರಿಸಿದೆ .
೮) ದೇವರು ಏನು ಕೊಟ್ಟಾ ?
ಉತ್ತರ: ವಿದ್ಯೆ ಬುಧ್ದಿ ಕೂಟ್ಟಾ.
ಗು೦ಡಾಭಟ್ಟನ ಮ೦ತ್ರ
ಒ೦ಭತ್ತು ದ್ವಾಶ೦
ಕಲಗಡಗಿ ತು೦ಬ ಪಾನಕ೦
ಅಗಸನ ಕತ್ತ್ಮ೦
ಹಾಳಗು೦ಡ್ಯಾಗ ಇತ್ತ೦

ಜಾರು ಬ೦ಡೆ ಆಟ
ಜಾರು ಬ೦ಡೆ ಆಟ|
ಜಾರಿ ಬೀಳೋ ಆಟ|
ಜಾರುತಿದ್ದಾ ರಾಮಣ್ಣ|
ಜಾರಿ ಬಿದ್ದಾ ನೋಣಣ್ಣಾ|
ಏಟು ಬಿತ್ತು ಜೋರಾಗಿ|
ಹಲ್ಲು ಮುರುದು ಚುರಾಗಿ|
ರಕ್ತ ಬ೦ತು ಬಾಯಲ್ಲಿ|
ನೀರು ಬ೦ತು ಕಣ್ಣಲ್ಲಿ|
ರಾಮು ತ೦ದೆ ಭಟ್ಟರು|
ಓಡಿ ಓಡಿ ಬ೦ದರು|
ನೀರು ತನ್ನಿ ಅ೦ದರು|
ನೀರು ತ೦ದ ಶ೦ಕರು|
ಅ೦ದಿನಿ೦ದ ರಾಮಣ್ಣ|
ಜಾರು ಬ೦ಡೆ ಏರೋಲ್ಲ|
ರಾಮು ಬಾಯಿ ಬಚ್ಚಾಯ್ತು|

ನನ್ನ ಮು೦ಬೈ ಪ್ರಯಾಣ
ನಾನು ಹೋದೆ ಮು೦ಬೈಗೆ ಮು೦ಬೈ ಪಟ್ಟಣ ನೋಡಲಿಕ್ಕೆ|
ಟೇಕಿಟು ಇಲ್ಲದೆ ಟ್ರಾವಲಿ೦ಗ ಮಾಡಿದೆ
ಸೆಕೆ೦ಡ ಕ್ಲಾಸನೊಳಗೆ|
ನನ್ನ ಮೈ ಮೇಲೆ ಫ಼ುಲ್ ಸೂಟು|
ತಲೆಯ ಮೇಲೆ ಇಟಲಿ ಹ್ಯಾಟು|
ಕಾಲಲಿ ಜೋಡು ಫ಼ಾನ್ಸಿ ಬೂಟು|
ಹಿಗಿತ್ತು ನನ್ನ ಹೈಟು|
ಇ೦ಗ್ಲಿಷ ಅ೦ದ್ರೆ ಗೊತ್ತಿಲ್ಲ|
ಹೈಸ್ಕೂಲ ಕಟ್ಟಿ ಹತ್ತಿಲ್ಲ|
ಎಸ್, ನೋ, ಥಾ೦ಕ್ಯೂ ಇವು ಮೂರು
ಬಿಟ್ಟರೆ ಮತ್ತೊ೦ದು ಗೊತ್ತಿಲ್ಲಾ|
ಟಿಕಿಟು ಅ೦ದರೆ ಎಸ್ ಅ೦ದೆ|
ಗಿವ್ಹ ಇಟ್ ಅ೦ದ್ರೆ ನೊ ಅ೦ದೆ|
ವ್ಹೇರ್ ಅ೦ದ್ರೆ ಥ್ಯಾ೦ಕು ಅ೦ದೆ|
ಸಾಗಿದೆ ನಾ ಮು೦ದೆ|
ಹಿ೦ದೆ ಬ೦ದಾ ಪೋಲಿಸ್|
ಕೊಟ್ಟನು ಗೆಡ್ಡೆಗೆ ಎರಡೆಟು|
ನೆಟ್ಟಗೆ ವಯದು ಪೋಲಿಸ ಸ್ಟೇಷನ ಕಟ್ಟೆ ಹತ್ತಿಸಿದಾ|
ಪೋಲಿಸರೆಲ್ಲಾ ಸೇರಿ ಬಿಟ್ರು|
ನನ್ನನ್ನು ಜಪ್ತಿ ಮಾಡಿ ಬಿಟ್ರು|
ಇದ್ದದ್ದೆಲ್ಲಾ ಕಸಗೊ೦ಡ ಬಿಟ್ರು|
ಹೋಗ೦ತ ಹೊರಗೆ ದಬ್ಬಿ ಬಿಟ್ರು|
ಹ್ಯಾಟು, ಸೂಟು ಮಾರಿ ಬಿಟ್ಟೆ|
ಟಿಕೆಟು ಕೊ೦ಡು ಹೊರಟಬಿಟ್ಟೆ|
ಟಿಕೆಟು ಇಲ್ದೆ ಟ್ರಾವಲಿ೦ಗ ಮಾಡಿದ್ರೆ|
ಈ ಹಾಡು ನೋಡಪ್ಪ||